KPSC Vaani do not provide services in mobile browsers, kindly download the application to use it.
KPSC Vaani ಯು ಈಗ ಮೊಬೈಲ್ ಬ್ರೌಸರ್ ನಲ್ಲಿ ಲಭ್ಯವಿಲ್ಲ, ಆದ್ದರಿಂದ ಈ ಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಿಕೊಂಡು ಬಳಸಿ.

Back
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ರಾಜ್ಯ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನಡೆಸಿದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ನಿರೀಕ್ಷಿಸಬಹುದಾದ ಕಟ್ ಆಫ್(Cut-off) ಅಂಕಗಳು

Author: Kpsc vaani Published on: Feb. 25, 2019

Image not found

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ರಾಜ್ಯ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಿ ಈ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ಕೀ ಉತ್ತರಗಳನ್ನು ಅಧಿಕೃತವಾಗಿ ರಾಜ್ಯ ಪೊಲೀಸ ಇಲಾಖೆಯು ತನ್ನ ಜಾಲತಾಣದಲ್ಲಿ ಈಗಾಗಲೇ ಪ್ರಕಟಿಸಿದೆ. ಈ ಸಾಮಾನ್ಯ ಪರೀಕ್ಷೆ ಬರೆದ ಅಭ್ಯರ್ಥಿಗಳು ಈಗಾಗಲೇ ತಮ್ಮ ಅಂಕಗಳನ್ನು ಪರಿಶೀಲಿಸಿ, ನಮ್ಮ ಮೊಬೈಲ್ ಅಪ್ಲಿಕೇಶನ್ ಬಳಸಿ ನಿಮ್ಮ ಅಂಕಗಳನ್ನು ನಮೂದಿಸಿದ್ದೀರಿ. ಇಲ್ಲಿ ಸುಮಾರು 1530 ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ವತಹಃ ತಾವೇ ತಮ್ಮ ಅಂಕಗಳನ್ನು ನಮೂದಿಸಿದ್ದು ಅವರಿಗೆಲ್ಲರಿಗೂ kpscvaani ಕಡೆಯಿಂದ ಧನ್ಯವಾದಗಳು.

* ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಪುರುಷ ಹುದ್ದೆಗಳ ನಿರೀಕ್ಷಿಸಬಹುದಾದ ಕಟ್ ಆಫ್ ಅಂಕಗಳು ಈ ಕೆಳಗಿನಂತಿವೆ:
> ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ - 71 to 75
> ಹಿಂದುಳಿದ ವರ್ಗದ(OBC) 2A ಅಭ್ಯರ್ಥಿಗಳಿಗೆ - 68 to 72
> ಹಿಂದುಳಿದ ವರ್ಗದ(OBC) 2B ಅಭ್ಯರ್ಥಿಗಳಿಗೆ - 65 to 69
> ಹಿಂದುಳಿದ ವರ್ಗದ(OBC) 3A ಅಭ್ಯರ್ಥಿಗಳಿಗೆ - 68 to 72
> ಹಿಂದುಳಿದ ವರ್ಗದ(OBC) 3B ಅಭ್ಯರ್ಥಿಗಳಿಗೆ - 69 to 73
> SC ಅಭ್ಯರ್ಥಿಗಳಿಗೆ - 66 to 70
> ST ಅಭ್ಯರ್ಥಿಗಳಿಗೆ - 69 to 73
> CAT-1 ಅಭ್ಯರ್ಥಿಗಳಿಗೆ - 68 to 72

* ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಮಹಿಳೆ ಹುದ್ದೆಗಳ ನಿರೀಕ್ಷಿಸಬಹುದಾದ ಕಟ್ ಆಫ್ ಅಂಕಗಳು ಈ ಕೆಳಗಿನಂತಿವೆ:
> ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ - 60 to 64
> ಹಿಂದುಳಿದ ವರ್ಗದ(OBC) 2A ಅಭ್ಯರ್ಥಿಗಳಿಗೆ - 55 to 58
> ಹಿಂದುಳಿದ ವರ್ಗದ(OBC) 2B ಅಭ್ಯರ್ಥಿಗಳಿಗೆ - 50 to 55
> ಹಿಂದುಳಿದ ವರ್ಗದ(OBC) 3A ಅಭ್ಯರ್ಥಿಗಳಿಗೆ - 55 to 58
> ಹಿಂದುಳಿದ ವರ್ಗದ(OBC) 3B ಅಭ್ಯರ್ಥಿಗಳಿಗೆ - 57 to 61
> SC ಅಭ್ಯರ್ಥಿಗಳಿಗೆ - 52 to 56
> ST ಅಭ್ಯರ್ಥಿಗಳಿಗೆ - 54 to 58
> CAT-1 ಅಭ್ಯರ್ಥಿಗಳಿಗೆ - 55 to 59


ವಿಶೇಷ ಸೂಚನೆಗಳು :-
* ನಾವು ಸಾಮಾನ್ಯವಾಗಿ ರಾಜ್ಯದ ಎಲ್ಲ ಅಭ್ಯರ್ಥಿಗಳಿಂದ ಅಂಕಗಳನ್ನು ಸಂಗ್ರಹಿಸಿದ್ದೇವೆ. ಆದರೆ ಜಿಲ್ಲಾವಾರು ಕಟ್ ಆಫ್ ಅಂಕಗಳು ಬೇರೆ-ಬೇರೆಯಾಗಿರುತ್ತವೆ ಹಾಗಾಗಿ ನಾವು ಪ್ರಕಟಿಸಿದ ಕಟ್-ಆಫ್ ಅಂಕಗಳನ್ನು ಸಾಮಾನ್ಯವಾಗಿ ಪರಿಗಣಿಸಿ, ಇದು ನಿರ್ದಿಷ್ಟವಾಗಿ ಯಾವುದೇ ಜಿಲ್ಲೆಗೆ ಅನ್ವಯಿಸುವದಿಲ್ಲ. ಬರುವ ಪರೀಕ್ಷೆಗಳಲ್ಲಿ ಜಿಲ್ಲಾವಾರು ಅಂಕಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತೇವೆ.
* ಕನ್ನಡ ಮಾಧ್ಯಮ, ಗ್ರಾಮೀಣ, ಮತ್ತು ಪಿಡಿಪಿ(PDP), ಮಾಜಿ ಸೈನಿಕ ಅಭ್ಯರ್ಥಿಗಳ ಅಂಕಗಳು ವ್ಯತ್ಯಾಸವಾಗಬಹುದು.
* ಈ ಕಟ್ ಆಫ್ ಸ್ಕೋರನ್ನು 1 : 1 ಅನುಪಾತದಲ್ಲಿರುವಂತೆ ರಚಿಸಲಾಗಿದೆ.(ದೈಹಿಕ ಪರೀಕ್ಷೆಗೆ 1:5 ಅನುಪಾತದಲ್ಲಿರುವಂತೆ ಪಟ್ಟಿ ಪ್ರಕಟವಾಗುವದರಿಂದ ಕಟ್ ಆಫ್ ಸ್ಕೋರ್ ಇದಕ್ಕಿಂತ ತುಂಬಾ ಕಡಿಮೆ ಬರುತ್ತದೆ)
* ಅಂಕ ನಮೂದಿಸುವಾಗ ಕೆಲವು ಅಭ್ಯರ್ಥಿಗಳಿಗೆ ಗೊಂದಲಗಳು ಉಂಟಾಗಿ, ಅವರು ನಮೂದಿಸಿರುವ ಅಂಕಗಳು ಸರಿಯಾಗಿ ಇರದೇ ಇರಬಹುದು. ಹಾಗಾಗಿ ಅಭ್ಯರ್ಥಿಗಳು ನಮೂದಿಸಿದ ಅಂಕಗಳು ಸರಿಯಾಗಿವೆ ಎಂಬ ನಿಖರತೆ ಇಲ್ಲ.
* ನಾವು ಪ್ರಕಟಿಸಿದ ಅಂಕಗಳು ಕೇವಲ KPSCVaani ಯು ಅಭಿಪ್ರಾಯವಾಗಿದ್ದು, ಇವು ಅಂತಿಮವಾಗಿ KSPಯು (ಕರ್ನಾಟಕ ಸ್ಟೇಟ್ ಪೊಲೀಸ್ ಡಿಪಾರ್ಟಮೆಂಟ್) ಪ್ರಕಟಿಸುವ ಕಟ್-ಆಫ್ ಅಂಕಗಳೊಂದಿಗೆ ವ್ಯತ್ಯಾಸವಾಗಬಹುದು.
* ನಿರೀಕ್ಷಿಸಿದ ಕಟ್-ಆಫ್ ಅಂಕಗಳನ್ನು ಪಡೆದಿಲ್ಲವೆಂದು ಅಭ್ಯರ್ಥಿಗಳು ಯಾವುದೇ ಬೇಸರ ಪಡುವ ಅಗತ್ಯವಿಲ್ಲ ಇದು ಕೇವಲ ತಾತ್ಕಾಲಿಕವಾಗಿದ್ದು ಅಂತಿಮ ಅಂಕಗಳೊಂದಿಗೆ ಹೋಲಿಸಿದಾಗ ತಮ್ಮ ಅಂಕಗಳು ಕೂಡ ಪರಿಗಣನೆಗೆ ಬರಬಹುದು.
* ನಿಮ್ಮ ಅಭಿಪ್ರಾಯಗಳನ್ನು kpscvaani@gmail.com ಗೆ ಈ-ಮೇಲ್ ಮಾಡುವ ಮೂಲಕ ತಿಳಿಸಿ. ಧನ್ಯವಾದಗಳು.

References: * 1536 users exam score provided by users in kpscvaani prediction
* previous selection lists from the official website of KSP